---Advertisement---

ಅಂಚೆ ಲೇಖನಗಳ ಕೇಂದ್ರೀಕೃತ ವಿತರಣೆಯ (IDC )ನೀತಿ ಮಾರ್ಗಸೂಚಿಗಳ ಸಾರಾಂಶ (ದಿನಾಂಕ 17.02.2025)

By Admin

Published On:

Follow Us
idc
---Advertisement---
WhatsApp Group Join Now
Telegram Group Join Now

ಉದ್ದೇಶ:

ಅಂಚೆ ಕಛೇರಿಗಳಲ್ಲಿನ ಕೌಂಟರ್ ಕಾರ್ಯಾಚರಣೆಗಳಿಂದ ವಿತರಣಾ ಕಾರ್ಯಗಳನ್ನು ಪ್ರತ್ಯೇಕಿಸುವ, ಮೀಸಲಾದ ವಿತರಣಾ ಕೇಂದ್ರಗಳ (Delivery Centers)(DCs) ಮೂಲಕ ಕೇಂದ್ರೀಕೃತ ವಿತರಣಾ ಸೇವೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಭಾರತೀಯ ಅಂಚೆಯ ವಿತರಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ನೀತಿಯು ಹೊಂದಿದೆ.

ಪ್ರಮುಖ ಮುಖ್ಯಾಂಶಗಳು:

  1. ಯಾಂತ್ರಿಕೃತ ವಿತರಣೆಗೆ ಪರಿವರ್ತನೆ: ಶೀಘ್ರ ಡೆಲಿವರಿಗಾಗಿ ಡೆಲಿವರಿ ಸಿಬ್ಬಂದಿ ನಡೆದಾಟ ದ/ಬೈಸಿಕಲ್ ಬೀಟ್‌ಗಳಿಂದ 2-ವೀಲರ್‌ಗಳಿಗೆ ಬದಲಾಯಿಸಲಾಗುತ್ತದೆ. 62% ವಿತರಣಾ ಬೀಟ್‌ಗಳು ಈಗಾಗಲೇ ಯಾಂತ್ರೀಕೃತಗೊಂಡಿವೆ( 2 ವೀಲರ್ ನಲ್ಲಿ ಮಾಡಲಾಗುತ್ತಿದೆ).ವೈಯಕ್ತಿಕ ದ್ವಿ-ಚಕ್ರ ವಾಹನವನ್ನು ಬಳಸಲು ಭತ್ಯೆಯನ್ನು ನೀಡಲಾಗುವುದು.
  2. ಕೇಂದ್ರೀಕೃತ ವಿತರಣಾ ಕೇಂದ್ರಗಳ ಅಗತ್ಯತೆಗಳು (DCs): ಅಂಚೆ ಕಾಗದ, ಪತ್ರ, ಪಾರ್ಸೆಲ್ಗಳ ವಿತರಣೆಯ ನಿರೀಕ್ಷಿತ ಬೆಳವಣಿಗೆ: Accountable articles: 94 ಕೋಟಿ (2024) ಇಂದ → 164 ಕೋಟಿ (2028-29) ಪಾರ್ಸೆಲ್‌ಗಳು: 6.7 ಕೋಟಿ (2024) → 46 ಕೋಟಿ (2028-29) DC ಗಳು ಸ್ಪೀಡ್ ಪೋಸ್ಟ್, ನೋಂದಾಯಿತ ಪೋಸ್ಟ್ (ರೆಜಿಸ್ಟರ್), ಪಾರ್ಸೆಲ್‌ಗಳು, ಸಾಮಾನ್ಯ ಮೇಲ್ ಮತ್ತು eMO ಗಳನ್ನು ನಿರ್ವಹಿಸುತ್ತವೆ. ಅಂಚೆ ಕಚೇರಿ ಸಿಬ್ಬಂದಿ ಕೌಂಟರ್ ಕಾರ್ಯಾಚರಣೆಗಳ ಮೇಲೆ ಹೆಚ್ಚು ಒತ್ತು ನೀಡಲು, ಅಂಚೆ ಕಚೇರಿಗಳಿಂದ ಪ್ರತ್ಯೇಕವಾಗಿ ಡೆಲಿವರಿ ಸೆಂಟರ್ ಗಳು ಕಾರ್ಯನಿರ್ವಹಿಸುತ್ತದೆ.
  3. ವಿತರಣಾ ಕೇಂದ್ರಗಳ ರಚನೆ( DCs): ಇಂಟಿಗ್ರೇಟೆಡ್ ಡಿಸಿಗಳು: ಡಾಕ್ಯುಮೆಂಟ್ ಮತ್ತು ಪಾರ್ಸೆಲ್ ಒಟ್ಟಿಗೆ ನಿರ್ವಹಿಸುತ್ತದೆ. ಪ್ರತ್ಯೇಕ DC ಗಳು ಮತ್ತು ನೋಡಲ್ ಡೆಲಿವರಿ ಕೇಂದ್ರಗಳು (NDCs): ಸ್ಥಳವು ಲಭ್ಯವಿಲ್ಲದಿದ್ದರೆ, ಪಾರ್ಸೆಲ್ ವಿಂಗಡನೆ ಪ್ರತ್ಯೇಕ ಪ್ರದೇಶದಲ್ಲಿರಬಹುದು. DC ಗಳು ಮೇಲ್ವಿಚಾರಣೆ/ಡೆಲಿವರಿ ಕಾರ್ಯಾಚರಣೆಯನ್ನು ಸುಧಾರಿಸುತ್ತಾರೆ.
    ಬೆಳಿಗ್ಗೆ/ಸಂಜೆ ವಿತರಣೆಗಳನ್ನು(ಡೆಲಿವರಿ) ನೀಡಲು ಅನುಮತಿಸುತ್ತಾರೆ ಮತ್ತು ಭಾನುವಾರ/ರಜಾದಿನದ ವಿತರಣೆಯನ್ನು ಸಕ್ರಿಯಗೊಳಿಸುವುದು.
  4. ವಿತರಣಾ ಕೇಂದ್ರಗಳಲ್ಲಿನ ಕಾರ್ಯಾಚರಣೆಯ ರೂಪು ರೇಷೆ: ಸಾಮಾನ್ಯ ಮೇಲ್, ಅಕೌಂಟೆಬಲ್ ಮೇಲ್ಸ್ ಮತ್ತು ಪಾರ್ಸೆಲ್‌ಗಳ ಕೇಂದ್ರೀಕೃತ ಪ್ರಕ್ರಿಯೆ. ವಿತರಣಾ ಸಿಬ್ಬಂದಿಯ ಸಮರ್ಥ ಕವರೇಜ್‌ಗಾಗಿ ನಿರ್ದಿಷ್ಟ ವಲಯಗಳಿಗೆ ನಿಯೋಜಿಸುತ್ತಾರೆ. ತಂತ್ರಜ್ಞಾನ-ಚಾಲಿತ ವಿಧಾನ (ಕಾಗದರಹಿತ ವಿತರಣೆ, OTP verification )
  5. ಯಾಂತ್ರೀಕರಣ ಮತ್ತು ಫ್ಲೀಟ್ ನಿರ್ವಹಣೆ: ಎಲ್ಲಾ ವಿತರಣಾ ಸಿಬ್ಬಂದಿ ಡಾಕ್ಯುಮೆಂಟ್/ಸಣ್ಣ ಪಾರ್ಸೆಲ್ ವಿತರಣೆಗಾಗಿ ದ್ವಿ ಚಕ್ರಗಳನ್ನು ಬಳಸಬೇಕು. ಭಾರೀ ಪಾರ್ಸೆಲ್ ವಿತರಣೆಗಾಗಿ 4-ಚಕ್ರದ ವಾಹನಗಳನ್ನು ಬಳಸಲಾಗುವುದು. ಇಂಧನ ಮರುಪಾವತಿ ಒದಗಿಸಲಾಗಿದೆ; ವಾಹನಗಳಿಲ್ಲದ ಸಿಬ್ಬಂದಿ ವಿದ್ಯುತ್ ಚಾಲಿತ ದ್ವಿ-ಚಕ್ರ ವಾಹನಗಳನ್ನು ಬಾಡಿಗೆಗೆ ಪಡೆಯಬಹುದು.
  6. ಡೆಲಿವರಿ ವಾಲ್ಯೂಮ್ ಮತ್ತು ಸಿಬಂದಿ: ವಿತರಣಾ ಸಿಬ್ಬಂದಿಯಿಂದ ನಿರೀಕ್ಷೆ: ಆರ್ಡಿನರಿ ಮೈಲ್ಸ್: ದಿನಕ್ಕೆ 95 ನೋಂದಾಯಿತ/ಸ್ಪೀಡ್ ಪೋಸ್ಟ್: ದಿನಕ್ಕೆ 42-43 ಪಾರ್ಸೆಲ್‌ಗಳು: ದಿನಕ್ಕೆ 60 (ಮೀಸಲಾದ ಪಾರ್ಸೆಲ್ ಡೆಲಿವರಿ ಸಿಬ್ಬಂದಿಗೆ) ಪ್ರತಿ DC ಯಲ್ಲಿ ಬಲ್ಕ್ ಡೆಲಿವರಿ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಬಹುದು.
  7. ಮೂಲಸೌಕರ್ಯ ಮತ್ತು ಜಾಗದ ಅಗತ್ಯತೆಗಳು: ಮೆಟ್ರೋ ನಗರಗಳು: ಪ್ರತಿ DC ಗೆ 50-80 ಡೆಲಿವರಿ ಸಿಬ್ಬಂದಿ, 2000-3500 ಚದರ ಅಡಿ ಜಾಗದ ಅಗತ್ಯವಿದೆ. ರಾಜ್ಯ ರಾಜಧಾನಿಗಳು/ಇತರ ನಗರಗಳು: ಪ್ರತಿ DC ಗೆ 15-60 ವಿತರಣಾ ಸಿಬ್ಬಂದಿ, 1000-2500 ಚದರ ಅಡಿ ಜಾಗದ ಅಗತ್ಯವಿದೆ. ವಿತರಣಾ ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳ ಲಭ್ಯವಿರಬೇಕು.
  8. ತಂತ್ರಜ್ಞಾನ ನವೀಕರಣಗಳು: ಪೋಸ್ಟ್‌ಮ್ಯಾನ್ ಮೊಬೈಲ್ ಅಪ್ಲಿಕೇಶನ್ (PMA): ರೂಟ್ ಆಪ್ಟಿಮೈಸೇಶನ್, OTP ಆಧಾರಿತ ವಿತರಣೆ, ಡಿಜಿಟಲ್ ಪಾವತಿಗಳು. ಡಿಸಿಗಳಲ್ಲಿ ಭದ್ರತೆಗಾಗಿ ಸಿಸಿಟಿವಿ ಅಳವಡಿಕೆ ಮತ್ತು ಪ್ರವೇಶ ನಿಯಂತ್ರಣ.
  9. ಕಾರ್ಯಾಚರಣೆಯ ಮಾರ್ಗಸೂಚಿಗಳು: ಬೇಡಿಕೆಯ ಆಧಾರದ ಮೇಲೆ ಭಾನುವಾರ/ರಜಾದಿನಗಳಲ್ಲಿ ವಿತರಣೆ. ಹೆಚ್ಚಿನ ಪ್ರಮಾಣದ ಪ್ರದೇಶಗಳಿಗೆ ಎರಡು ವಿತರಣಾ ಪಾಳಿಗಳನ್ನು (ಬೆಳಿಗ್ಗೆ/ಸಂಜೆ) ಅಳವಡಿಸಬಹುದು. ಪ್ರತಿ ಡಿಸಿಗೆ ಮಾನಿಟರಿಂಗ್‌ಗಾಗಿ ಫೆಸಿಲಿಟಿ ಐಡಿಗಳು ಮತ್ತು ಪಿನ್ ಕೋಡ್‌ಗಳನ್ನು ನಿಯೋಜಿಸಲಾಗುವುದು.
  10. ಅನುಷ್ಠಾನ ಮತ್ತು ವರದಿ: ಅಂಚೆ ವೃತ್ತಗಳುDC ಗಳಿಗೆ (ಸ್ವಂತ ಅಥವಾ ಗುತ್ತಿಗೆ ಕಟ್ಟಡಗಳು) ಜಾಗವನ್ನು ಗುರುತಿಸಬೇಕು. 31ನೇ ಮಾರ್ಚ್ 2025 ರೊಳಗೆ ಆರಂಭಿಕ ವರದಿಯ ನಿರೀಕ್ಷೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment