ಉದ್ದೇಶ:
ಅಂಚೆ ಕಛೇರಿಗಳಲ್ಲಿನ ಕೌಂಟರ್ ಕಾರ್ಯಾಚರಣೆಗಳಿಂದ ವಿತರಣಾ ಕಾರ್ಯಗಳನ್ನು ಪ್ರತ್ಯೇಕಿಸುವ, ಮೀಸಲಾದ ವಿತರಣಾ ಕೇಂದ್ರಗಳ (Delivery Centers)(DCs) ಮೂಲಕ ಕೇಂದ್ರೀಕೃತ ವಿತರಣಾ ಸೇವೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಭಾರತೀಯ ಅಂಚೆಯ ವಿತರಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ನೀತಿಯು ಹೊಂದಿದೆ.
ಪ್ರಮುಖ ಮುಖ್ಯಾಂಶಗಳು:
- ಯಾಂತ್ರಿಕೃತ ವಿತರಣೆಗೆ ಪರಿವರ್ತನೆ: ಶೀಘ್ರ ಡೆಲಿವರಿಗಾಗಿ ಡೆಲಿವರಿ ಸಿಬ್ಬಂದಿ ನಡೆದಾಟ ದ/ಬೈಸಿಕಲ್ ಬೀಟ್ಗಳಿಂದ 2-ವೀಲರ್ಗಳಿಗೆ ಬದಲಾಯಿಸಲಾಗುತ್ತದೆ. 62% ವಿತರಣಾ ಬೀಟ್ಗಳು ಈಗಾಗಲೇ ಯಾಂತ್ರೀಕೃತಗೊಂಡಿವೆ( 2 ವೀಲರ್ ನಲ್ಲಿ ಮಾಡಲಾಗುತ್ತಿದೆ).ವೈಯಕ್ತಿಕ ದ್ವಿ-ಚಕ್ರ ವಾಹನವನ್ನು ಬಳಸಲು ಭತ್ಯೆಯನ್ನು ನೀಡಲಾಗುವುದು.
- ಕೇಂದ್ರೀಕೃತ ವಿತರಣಾ ಕೇಂದ್ರಗಳ ಅಗತ್ಯತೆಗಳು (DCs): ಅಂಚೆ ಕಾಗದ, ಪತ್ರ, ಪಾರ್ಸೆಲ್ಗಳ ವಿತರಣೆಯ ನಿರೀಕ್ಷಿತ ಬೆಳವಣಿಗೆ: Accountable articles: 94 ಕೋಟಿ (2024) ಇಂದ → 164 ಕೋಟಿ (2028-29) ಪಾರ್ಸೆಲ್ಗಳು: 6.7 ಕೋಟಿ (2024) → 46 ಕೋಟಿ (2028-29) DC ಗಳು ಸ್ಪೀಡ್ ಪೋಸ್ಟ್, ನೋಂದಾಯಿತ ಪೋಸ್ಟ್ (ರೆಜಿಸ್ಟರ್), ಪಾರ್ಸೆಲ್ಗಳು, ಸಾಮಾನ್ಯ ಮೇಲ್ ಮತ್ತು eMO ಗಳನ್ನು ನಿರ್ವಹಿಸುತ್ತವೆ. ಅಂಚೆ ಕಚೇರಿ ಸಿಬ್ಬಂದಿ ಕೌಂಟರ್ ಕಾರ್ಯಾಚರಣೆಗಳ ಮೇಲೆ ಹೆಚ್ಚು ಒತ್ತು ನೀಡಲು, ಅಂಚೆ ಕಚೇರಿಗಳಿಂದ ಪ್ರತ್ಯೇಕವಾಗಿ ಡೆಲಿವರಿ ಸೆಂಟರ್ ಗಳು ಕಾರ್ಯನಿರ್ವಹಿಸುತ್ತದೆ.
- ವಿತರಣಾ ಕೇಂದ್ರಗಳ ರಚನೆ( DCs): ಇಂಟಿಗ್ರೇಟೆಡ್ ಡಿಸಿಗಳು: ಡಾಕ್ಯುಮೆಂಟ್ ಮತ್ತು ಪಾರ್ಸೆಲ್ ಒಟ್ಟಿಗೆ ನಿರ್ವಹಿಸುತ್ತದೆ. ಪ್ರತ್ಯೇಕ DC ಗಳು ಮತ್ತು ನೋಡಲ್ ಡೆಲಿವರಿ ಕೇಂದ್ರಗಳು (NDCs): ಸ್ಥಳವು ಲಭ್ಯವಿಲ್ಲದಿದ್ದರೆ, ಪಾರ್ಸೆಲ್ ವಿಂಗಡನೆ ಪ್ರತ್ಯೇಕ ಪ್ರದೇಶದಲ್ಲಿರಬಹುದು. DC ಗಳು ಮೇಲ್ವಿಚಾರಣೆ/ಡೆಲಿವರಿ ಕಾರ್ಯಾಚರಣೆಯನ್ನು ಸುಧಾರಿಸುತ್ತಾರೆ.
ಬೆಳಿಗ್ಗೆ/ಸಂಜೆ ವಿತರಣೆಗಳನ್ನು(ಡೆಲಿವರಿ) ನೀಡಲು ಅನುಮತಿಸುತ್ತಾರೆ ಮತ್ತು ಭಾನುವಾರ/ರಜಾದಿನದ ವಿತರಣೆಯನ್ನು ಸಕ್ರಿಯಗೊಳಿಸುವುದು. - ವಿತರಣಾ ಕೇಂದ್ರಗಳಲ್ಲಿನ ಕಾರ್ಯಾಚರಣೆಯ ರೂಪು ರೇಷೆ: ಸಾಮಾನ್ಯ ಮೇಲ್, ಅಕೌಂಟೆಬಲ್ ಮೇಲ್ಸ್ ಮತ್ತು ಪಾರ್ಸೆಲ್ಗಳ ಕೇಂದ್ರೀಕೃತ ಪ್ರಕ್ರಿಯೆ. ವಿತರಣಾ ಸಿಬ್ಬಂದಿಯ ಸಮರ್ಥ ಕವರೇಜ್ಗಾಗಿ ನಿರ್ದಿಷ್ಟ ವಲಯಗಳಿಗೆ ನಿಯೋಜಿಸುತ್ತಾರೆ. ತಂತ್ರಜ್ಞಾನ-ಚಾಲಿತ ವಿಧಾನ (ಕಾಗದರಹಿತ ವಿತರಣೆ, OTP verification )
- ಯಾಂತ್ರೀಕರಣ ಮತ್ತು ಫ್ಲೀಟ್ ನಿರ್ವಹಣೆ: ಎಲ್ಲಾ ವಿತರಣಾ ಸಿಬ್ಬಂದಿ ಡಾಕ್ಯುಮೆಂಟ್/ಸಣ್ಣ ಪಾರ್ಸೆಲ್ ವಿತರಣೆಗಾಗಿ ದ್ವಿ ಚಕ್ರಗಳನ್ನು ಬಳಸಬೇಕು. ಭಾರೀ ಪಾರ್ಸೆಲ್ ವಿತರಣೆಗಾಗಿ 4-ಚಕ್ರದ ವಾಹನಗಳನ್ನು ಬಳಸಲಾಗುವುದು. ಇಂಧನ ಮರುಪಾವತಿ ಒದಗಿಸಲಾಗಿದೆ; ವಾಹನಗಳಿಲ್ಲದ ಸಿಬ್ಬಂದಿ ವಿದ್ಯುತ್ ಚಾಲಿತ ದ್ವಿ-ಚಕ್ರ ವಾಹನಗಳನ್ನು ಬಾಡಿಗೆಗೆ ಪಡೆಯಬಹುದು.
- ಡೆಲಿವರಿ ವಾಲ್ಯೂಮ್ ಮತ್ತು ಸಿಬಂದಿ: ವಿತರಣಾ ಸಿಬ್ಬಂದಿಯಿಂದ ನಿರೀಕ್ಷೆ: ಆರ್ಡಿನರಿ ಮೈಲ್ಸ್: ದಿನಕ್ಕೆ 95 ನೋಂದಾಯಿತ/ಸ್ಪೀಡ್ ಪೋಸ್ಟ್: ದಿನಕ್ಕೆ 42-43 ಪಾರ್ಸೆಲ್ಗಳು: ದಿನಕ್ಕೆ 60 (ಮೀಸಲಾದ ಪಾರ್ಸೆಲ್ ಡೆಲಿವರಿ ಸಿಬ್ಬಂದಿಗೆ) ಪ್ರತಿ DC ಯಲ್ಲಿ ಬಲ್ಕ್ ಡೆಲಿವರಿ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಬಹುದು.
- ಮೂಲಸೌಕರ್ಯ ಮತ್ತು ಜಾಗದ ಅಗತ್ಯತೆಗಳು: ಮೆಟ್ರೋ ನಗರಗಳು: ಪ್ರತಿ DC ಗೆ 50-80 ಡೆಲಿವರಿ ಸಿಬ್ಬಂದಿ, 2000-3500 ಚದರ ಅಡಿ ಜಾಗದ ಅಗತ್ಯವಿದೆ. ರಾಜ್ಯ ರಾಜಧಾನಿಗಳು/ಇತರ ನಗರಗಳು: ಪ್ರತಿ DC ಗೆ 15-60 ವಿತರಣಾ ಸಿಬ್ಬಂದಿ, 1000-2500 ಚದರ ಅಡಿ ಜಾಗದ ಅಗತ್ಯವಿದೆ. ವಿತರಣಾ ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳ ಲಭ್ಯವಿರಬೇಕು.
- ತಂತ್ರಜ್ಞಾನ ನವೀಕರಣಗಳು: ಪೋಸ್ಟ್ಮ್ಯಾನ್ ಮೊಬೈಲ್ ಅಪ್ಲಿಕೇಶನ್ (PMA): ರೂಟ್ ಆಪ್ಟಿಮೈಸೇಶನ್, OTP ಆಧಾರಿತ ವಿತರಣೆ, ಡಿಜಿಟಲ್ ಪಾವತಿಗಳು. ಡಿಸಿಗಳಲ್ಲಿ ಭದ್ರತೆಗಾಗಿ ಸಿಸಿಟಿವಿ ಅಳವಡಿಕೆ ಮತ್ತು ಪ್ರವೇಶ ನಿಯಂತ್ರಣ.
- ಕಾರ್ಯಾಚರಣೆಯ ಮಾರ್ಗಸೂಚಿಗಳು: ಬೇಡಿಕೆಯ ಆಧಾರದ ಮೇಲೆ ಭಾನುವಾರ/ರಜಾದಿನಗಳಲ್ಲಿ ವಿತರಣೆ. ಹೆಚ್ಚಿನ ಪ್ರಮಾಣದ ಪ್ರದೇಶಗಳಿಗೆ ಎರಡು ವಿತರಣಾ ಪಾಳಿಗಳನ್ನು (ಬೆಳಿಗ್ಗೆ/ಸಂಜೆ) ಅಳವಡಿಸಬಹುದು. ಪ್ರತಿ ಡಿಸಿಗೆ ಮಾನಿಟರಿಂಗ್ಗಾಗಿ ಫೆಸಿಲಿಟಿ ಐಡಿಗಳು ಮತ್ತು ಪಿನ್ ಕೋಡ್ಗಳನ್ನು ನಿಯೋಜಿಸಲಾಗುವುದು.
- ಅನುಷ್ಠಾನ ಮತ್ತು ವರದಿ: ಅಂಚೆ ವೃತ್ತಗಳುDC ಗಳಿಗೆ (ಸ್ವಂತ ಅಥವಾ ಗುತ್ತಿಗೆ ಕಟ್ಟಡಗಳು) ಜಾಗವನ್ನು ಗುರುತಿಸಬೇಕು. 31ನೇ ಮಾರ್ಚ್ 2025 ರೊಳಗೆ ಆರಂಭಿಕ ವರದಿಯ ನಿರೀಕ್ಷೆ.