ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯ ಇನ್ಸೆಂಟಿವ್ /ಕಮಿಷನ್ ರೂಲ್ಸ್ ನಲ್ಲಿ ಕೆಲವು ಬದಲಾವಣೆಮಾಡಲಾಗಿದೆ.
ಒಂದು ಹಣಕಾಸು ವರ್ಷದಲ್ಲಿ ಮಾರಾಟ ಪಡೆಗೆ(ಜಿಡಿಎಸ್/ಡಿಪಾರ್ಟ್ಮೆಂಟ್ ನೌಕರರಿಗೆ)ಕನಿಷ್ಠ ಪಾಲಿಸಿಯ ಅವಶ್ಯಕತೆ ಇಲ್ಲಾ.
ಹೊಸ ಪಾಲಿಸಿಗಳನ್ನು ಪಡೆಯಲು ಸಾಧ್ಯವಾಗದ ಹುದ್ದೆ ಗಳಿಗೆ ಬಡ್ತಿ ಪಡೆದ ಉದ್ಯೋಗಿಗಳು ನವೀಕರಣ ಪ್ರೀಮಿಯಂಗಳನ್ನು(ರಿನಿವಲ್ )ಸ್ವೀಕರಿಸುವವರೆಗೆ ಹಿಂದೆ ಸಂಗ್ರಹಿಸಿದ ಪಾಲಿಸಿಗಳ ಮೇಲೆ ಇನ್ಸೆಂಟಿವ್ ಗಳಿಸುವುದನ್ನು ಮುಂದುವರೆಸುತ್ತಾರೆ.
ಕ್ರಿಮಿನಲ್ ಚಟುವಟಿಕೆಗಳು, ವಂಚನೆ ಅಥವಾ ಇತರ ದುಷ್ಕೃತ್ಯಕ್ಕಾಗಿ ಏಜೆಂಟ್ಸ್ ಐಡಿ ಕೊನೆಗೊಳಿಸಿದರೆ ಇನ್ಸೆಂಟಿವ್ / ಕಮಿಷನ್ (ರಿನಿವಲ್ ಮತ್ತು ಹೊಸ ಪಾಲಿಸಿ) ಪಾವತಿಸಲಾಗುವುದಿಲ್ಲ.
ನಾಮನಿರ್ದೇಶನ ಸೌಲಭ್ಯವು ಮರಣಿಸಿದ ಏಜೆಂಟ್ ನ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಗಳಿಗೆ ಪಾವತಿಸಬಹುದಾದ ಇನ್ಸೆಂಟಿವ್ ಪಡೆಯಲು ಅನುಮತಿಸುತ್ತದೆ.ಏಜೆಂಟ್ ಸೇವೆ ಮತ್ತು ನೀತಿ ಮಾನದಂಡಗಳನ್ನು ಪೂರೈಸಿರಬೇಕು.
ಏಜೆನ್ಸಿ ಪಡೆಯಲು ಯಾವುದೇ ವಯಸ್ಸಿನ ಮಿತಿ ಇಲ್ಲ.
ಸೇವಾ ನಿವೃತ್ತಿ ಹೊಂದಿದ ಉದ್ಯೋಗಿಗಳು (DE/GDS) ಮೂರು ತಿಂಗಳೊಳಗೆ ಫೀಲ್ಡ್ ಆಫೀಸರ್ಗಳಾಗಿ ದಾಖಲಾದರೆ, ನಿವೃತ್ತಿಯ ನಂತರ ಹಳೇಯ ಪಾಲಿಸಿಯ ನವೀಕರಣದ ಇನ್ಸೆಂಟಿವ್ ಗಳಿಸುವುದನ್ನು ಮುಂದುವರಿಸಬಹುದು.
ಈ ಮಾರ್ಪಾಡುಗಳು 31.03.2025 ರಿಂದ ಜಾರಿಯಾಗುತ್ತದೆ.